1 Peter 4

ಪರಿವರ್ತನೆಗೊಂಡ ಜೀವಿತಗಳು

1
4:1 1 ಪೇತ್ರ. 3:18:
ಕ್ರಿಸ್ತನು ನಮಗೋಸ್ಕರ ತನ್ನ ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ
4:1 ಫಿಲಿ. 2:5; ಎಫೆ. 6:13:
ಅದೇ ಮನೋಭಾವವುಳ್ಳವರಾಗಿದ್ದು ಬಾಧೆಪಡಲು ಸಿದ್ಧರಾಗಿರಿ. ಏಕೆಂದರೆ
4:1 ರೋಮಾ. 6:2,7; ಗಲಾ. 5:24; ಕೊಲೊ. 3:3, 5:
ಶರೀರದಲ್ಲಿ ಬಾಧೆಪಟ್ಟವನು
4:1 2 ಪೇತ್ರ. 2:14
ಪಾಪ ಮಾಡುವುದನ್ನು ನಿಲ್ಲಿಸಿದವನಾಗಿದ್ದಾನೆ.
2ಆದ್ದರಿಂದ ಉಳಿದಿರುವ ತನ್ನ ಜೀವಮಾನ ಕಾಲದಲ್ಲಿ
4:2 1 ಪೇತ್ರ. 1:14; ತೀತ. 2:12; 1 ಯೋಹಾ. 2:16.
ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ
4:2 ರೋಮಾ. 6:11:
ದೇವರ ಚಿತ್ತದ ಪ್ರಕಾರ ಬದುಕುವುದಕ್ಕೆ
4:2 ರೋಮಾ. 6:14; 14:7; 2 ಕೊರಿ. 5:15:
ಪ್ರಯತ್ನಮಾಡುವನು.

3ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ
4:3 ಎಫೆ. 4:17-19; 1 ಥೆಸ. 4:5; 1 ಕೊರಿ. 12:2:
ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ
4:3 ಯೆಹೆ. 45:9; ಅ. ಕೃ. 17:30.
ಕಾಲಕಳೆದದ್ದು ಸಾಕು.
4ಅವರು ಮಾಡುವ ಅಪರಿಮಿತವಾದ
4:4 ಎಫೆ. 5:18:
ಪಟಿಂಗತನದಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು
4:4 1 ಪೇತ್ರ. 2:12; 3:16:
ನಿಮ್ಮನ್ನು ದೂಷಿಸುತ್ತಾರೆ.
5ಅವರು
4:5 ಅ. ಕೃ. 10:42; 2 ಕೊರಿ. 5:10; ಯಾಕೋಬ 5:9:
ಬದುಕಿರುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಸಿದ್ಧವಾಗಿರುವಾತನಿಗೆ ಉತ್ತರ ಕೊಡಬೇಕು.
6ಸತ್ತಿರುವವರು ಮನುಷ್ಯ ಜಾತಿಗೆ ಬರುವ ಮರಣವೆಂಬ ತೀರ್ಪನ್ನು ಶರೀರಗಳಲ್ಲಿದ್ದಾಗ ಹೊಂದಿದರು.
4:6 ಅಥವಾ, ಶರೀರವನ್ನು ಬಿಟ್ಟವರಾಗಿ.
ಅವರು ಆತ್ಮ ಸಂಬಂಧವಾಗಿ ದೇವರಂತೆ ಜೀವಿಸಲೆಂದು
4:6 1 ಪೇತ್ರ. 3:19:
ಅವರಿಗೂ ಸುವಾರ್ತೆಯು ತಿಳಿಸಲ್ಪಟ್ಟಿತು.

ದೇವರ ವರಗಳ ಒಳ್ಳೆಯ ನಿರ್ವಾಹಕನು

7
4:7 ಯಾಕೋಬ 5:8:
ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಜಿತೇಂದ್ರಿಯರಾಗಿಯೂ ಯಾವಾಗಲೂ
4:7 ಮತ್ತಾ 26:41; ಲೂಕ. 21:36:
ಪ್ರಾರ್ಥನೆಗೆ ಸಿದ್ಧವಾಗಿರುವಂತೆ
4:7 1 ಪೇತ್ರ. 1:13:
ಸ್ವಸ್ಥಚಿತ್ತರಾಗಿಯೂ ಇರಿ.
8ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಪ್ರಾಮಾಣಿಕವಾದ ಪ್ರೀತಿಯಿರಲಿ.
4:8 1 ಕೊರಿ. 13:5, 6; ಜ್ಞಾ. 10:12; 17:9:
ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.
9ಗುಣಗುಟ್ಟದೆ ಒಬ್ಬರಿಗೊಬ್ಬರು
4:9 ಇಬ್ರಿ. 13:2; 1 ತಿಮೊ. 3:2; ತೀತ. 1:8:
ಅತಿಥಿ ಸತ್ಕಾರ ಮಾಡಿರಿ.

10ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ
4:10 ಲೂಕ. 12:42; 1 ಕೊರಿ. 4:1, 2; ತೀತ. 1:7:
ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು
4:10 ರೋಮಾ. 12:6, 7; 1 ಕೊರಿ. 4:7; ಮತ್ತಾ 25:15:
ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ.
11ಒಬ್ಬನು ಬೋಧಿಸುವವನಾದರೆ
4:11 ಅ. ಕೃ. 7:38; ರೋಮಾ. 3:2; ಇಬ್ರಿ. 5:12:
ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ
4:11 1 ಕೊರಿ. 10:31:
ದೇವರಿಗೆ ಸ್ತೋತ್ರ ಉಂಟಾಗುವುದು.
4:11 ರೋಮಾ. 11:36:
ಯೇಸು ಕ್ರಿಸ್ತನಿಗೆ
4:11 1 ಪೇತ್ರ. 5:11; ಯೂದ. 25; ಪ್ರಕ. 1:6; 5:13:
ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್.

ಕ್ರೈಸ್ತನಾಗಿ ಬಾಧೆಯನ್ನಿಭುವಿಸುವುದು

12ಪ್ರಿಯರೇ, ನಿಮ್ಮನ್ನು ಪರಿಶೋಧಿಸುವುದಕ್ಕಾಗಿ
4:12 1 ಪೇತ್ರ. 1:7:
ಅಗ್ನಿ ಪರೀಕ್ಷೆ ಬರುವಾಗ ನೀವು ಆಶ್ಚರ್ಯಪಡಬೇಡಿರಿ. ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ.
13ಆದರೆ
4:13 ಫಿಲಿ. 3:10, 11; ಅ. ಕೃ. 5:41:
ನೀವು ಎಷ್ಟರ ಮಟ್ಟಿಗೆ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷಪಡಿರಿ. ಆದ್ದರಿಂದ
4:13 1 ಪೇತ್ರ. 1:5-7; 5:1; ರೋಮಾ. 8:17, 18; ಯೂದ. 24:
ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ
14
4:14 ಮತ್ತಾ 5:11; ಯೋಹಾ. 15:21; ಇಬ್ರಿ. 11:26:
ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು.
4:14 ಯೆಶಾ. 11:2:
ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.

15
4:15 1 ಪೇತ್ರ. 2:19, 20; 3:14, 17:
ನಿಮ್ಮಲ್ಲಿ ಯಾವನಾದರು ಕೊಲೆಗಾರನು, ಕಳ್ಳನು, ದುಷ್ಟನು, ಪರರ ಕಾರ್ಯಗಳಲ್ಲಿ
4:15 ಅಥವಾ, ನಿಕೃಷ್ಟ ಕಾರ್ಯಗಳನ್ನು ನಡಿಸುವವನು. ತಲೆಹಾಕುವವನು ಎಂಬುದರೊಂದಿಗೆ 1 ಥೆಸ. 4:11; 2 ಥೆಸ. 3:11; 1 ತಿಮೊ. 5:13:
ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು.
16ಆದರೆ
4:16 1 ಪೇತ್ರ. 2:19, 20; 3:14, 17; ಅ. ಕೃ. 26:28:
ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.

17ನ್ಯಾಯವಿಚಾರಣೆಯ ಸಮಯ ಬಂದಿದೆ.
4:17 ಯೆರೆ. 25:29; ಯೆಹೆ. 9:6; ಆಮೋ. 3:2; ರೋಮಾ. 2:9:
ಆ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಗಿದೆಯಲ್ಲಾ.
4:17 ಲೂಕ. 23:31:
ಅದು ನಮ್ಮಲ್ಲಿ ಪ್ರಾರಂಭವಾಗುವುದಾದರೆ, ದೇವರ ಸುವಾರ್ತೆಯನ್ನು ನಂಬಲೊಲ್ಲದವರ ಅಂತ್ಯ ಹೇಗಿರಬಹುದು?
18
4:18 ಜ್ಞಾ. 11:31:
ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ, ಭಕ್ತಿಹೀನನೂ ಮತ್ತು ಪಾಪಿಷ್ಠನೂ ರಕ್ಷಣೆ ಹೊಂದುವುದು ಹೇಗೆ?
ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ಒಳ್ಳೆದನ್ನು ಮಾಡುವವರಾಗಿದ್ದು
4:19 ಕೀರ್ತ. 31:5; ಲೂಕ. 23:46; 2 ತಿಮೊ. 1:12:
ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿ ಕರ್ತನಿಗೆ ಒಪ್ಪಿಸಲಿ.

19

Copyright information for KanULB